ಬದಲಾವಣೆಯ ಕಥೆಗಳು

StoriesofChangee

ಕಿರು ಪರಿಚಯಗಳು, ದಿನಚರಿಗಳು, ವೀಡಿಯೋಗಳು, ಸಂಭಾಷಣೆಗಳು: ಈ ವಿಭಾಗದಲ್ಲಿರುವ ಪ್ರತಿ ಅಂಶವೂ ನಾವು ಮತ್ತು ನಮ್ಮ ಕೆಲಸದತ್ತ ನಿಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುತ್ತದೆ

ನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್‌ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್‌), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್‌ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.

    youtube play iconಕೋವಿಡ್‌-19ರ ಕಾಲದಲ್ಲಿ ಶಾಲಾ ಶಿಕ್ಷಣ: ಉತ್ತರಾಖಂಡದ ಒಂದು ಕಥನ

    ಕೋವಿಡ್‌-19ರ ಕಾಲದಲ್ಲಿ ಶಾಲಾ ಶಿಕ್ಷಣ: ಉತ್ತರಾಖಂಡದ ಒಂದು ಕಥನ

    ಕೋವಿಡ್‌-19ರ ಕಾರಣದಿಂದ ಶಾಲೆಗಳು ಎರಡು ವರ್ಷಗಳ ಕಾಲ ಮುಚ್ಚಿದ ಸಂದರ್ಭದಲ್ಲಿ ಉಂಟಾದ ಬೋಧನೆ ಮತ್ತು ಕಲಿಕೆಯ ಬಿಕ್ಕಟ್ಟನ್ನು ಕುರಿತಾದ ಕಥೆ. ಇದು, ಮಕ್ಕಳ ಶಿಕ್ಷಣವು ನಿಲ್ಲದೆ ಮುಂದುವರೆಯುವಂತೆ ಖಚಿತಪಡಿಸಿಕೊಳ್ಳಲು ಉತ್ತರಾಖಂಡದ ಶಿಕ್ಷಕರು, ಮುಖ್ಯ ಶಿಕ್ಷಕರು, ಮತ್ತು ಮುಖ್ಯ ಶಿಕ್ಷಣಾಧಿಕಾರಿಗಳು ಹೇಗೆ ಸ್ಪಂದಿಸಿದರು ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ.

    ಪ್ರಧಾನ ಕಥನಗಳು
    youtube play iconನಕ್ಷತ್ರಗಳು ಸಂಚಿಕೆ 09 | ಹೂಡ್ಲುಮನೆ ಹಿರಿಯ ಪ್ರಾಥಮಿಕ ಶಾಲೆಯ ಯಶೋಗಾಥೆ. ಉಮಾಶಂಕರ್‌ ಪೆರಿಯೋಡಿ ಅವರೊಂದಿಗೆ

    ನಕ್ಷತ್ರಗಳು ಸಂಚಿಕೆ 09 | ಹೂಡ್ಲುಮನೆ ಹಿರಿಯ ಪ್ರಾಥಮಿಕ ಶಾಲೆಯ ಯಶೋಗಾಥೆ. ಉಮಾಶಂಕರ್‌ ಪೆರಿಯೋಡಿ ಅವರೊಂದಿಗೆ

    ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅತ್ಯಂತ ಹಿಂದುಳಿದ ಹಳ್ಳಿಯೊಂದರಲ್ಲಿ (ನಂಜುಂಡಯ್ಯ ಸಮಿತಿ ವರದಿಯಂತೆೆ) ಇರುವ ಈ ಶಾಲೆಯು ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.

    ಪ್ರಧಾನ ಕಥನಗಳು
    ಧೀರ ಮಹಿಳೆಯರು: ಸಾಮಾಜಿಕ ಕ್ಷೇತ್ರದ ಕಾರ್ಯಕರ್ತರೊಂದಿಗೆ ಸಂಭಾಷಣೆಗಳು

    ಧೀರ ಮಹಿಳೆಯರು: ಸಾಮಾಜಿಕ ಕ್ಷೇತ್ರದ ಕಾರ್ಯಕರ್ತರೊಂದಿಗೆ ಸಂಭಾಷಣೆಗಳು

    ಭಾರತದಾದ್ಯಂತ ತಾವು ನಡೆಸಿದ ಸಂಭಾಷಣೆಗಳು ಅನುದಾನ ನಿರ್ವಾಹಕರೊಬ್ಬರನ್ನು ಬರೆಯಲು ಪ್ರೇರೇಪಿಸಿವೆ

    ಪ್ರಧಾನ ಕಥನಗಳು
    ಸ್ಥಳೀಯ ಆಡಳಿತದಲ್ಲಿ ಮಕ್ಕಳು 

    ಸ್ಥಳೀಯ ಆಡಳಿತದಲ್ಲಿ ಮಕ್ಕಳು 

    ಸ್ಯಾನಿಟರಿ ಪ್ಯಾಡ್‌ಗಳನ್ನು ಮಾರುವ ಯಂತ್ರಗಳು, ಆಟದ ಮೈದಾನಗಳು, ಸ್ವಚ್ಛವಾದ ಹಳ್ಳಿಗಳು ಮುಂತಾದ ಸೌಲಭ್ಯಗಳಿಗೆ ಅಭಿಯಾನ ನಡೆಸುವ ಮೂಲಕ ಮಕ್ಕಳು ಸ್ಥಳೀಯ ಆಡಳಿತದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. 

    ಪ್ರಧಾನ ಕಥನಗಳು
    ಗೇಮ್‌ಛೇಂಜರ್ಸ್‌: ಮಹಿಳೆಯರೇ ಇರುವ ಉತ್ತರಾಖಂಡದ ಗ್ರಾಮ ಪಂಚಾಯಿತಿಗಳು

    ಗೇಮ್‌ಛೇಂಜರ್ಸ್‌: ಮಹಿಳೆಯರೇ ಇರುವ ಉತ್ತರಾಖಂಡದ ಗ್ರಾಮ ಪಂಚಾಯಿತಿಗಳು

    ಹಿಮಾಲಯದಲ್ಲಿರುವ ಈ ರಾಜ್ಯದ ಹಳ್ಳಿಗಳ ಜನರು ವಲಸೆ ಹೋಗುವುದು ಸಾಮಾನ್ಯ. ಆದರೆ, ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರ ಆಡಳಿತದಿಂದ ಹಳ್ಳಿಗಳ ಭವಿಷ್ಯವೇ ಬದಲಾಗುತ್ತಿದೆ.

    ಪ್ರಧಾನ ಕಥನಗಳು
    youtube play iconನಕ್ಷತ್ರಗಳು ಸಂಚಿಕೆ 08 | ಉಮಾಶಂಕರ ಪೆರಿಯೋಡಿ ಅವರೊಂದಿಗೆ ವಾಣಿ ಎಂ. ಎಲ್‌., ಮಂಡ್ಯ, ಕರ್ನಾಟಕ

    ನಕ್ಷತ್ರಗಳು ಸಂಚಿಕೆ 08 | ಉಮಾಶಂಕರ ಪೆರಿಯೋಡಿ ಅವರೊಂದಿಗೆ ವಾಣಿ ಎಂ. ಎಲ್‌., ಮಂಡ್ಯ, ಕರ್ನಾಟಕ

    ʼನಕ್ಷತ್ರಗಳುʼ ಪಾಡ್‌ಕಾಸ್ಟ್‌ ಸರಣಿಯ ಸಂಚಿಕೆ 8ರಲ್ಲಿ, ಶಿಕ್ಷಕಿಯೊಬ್ಬರು ತಮ್ಮ ಆದರ್ಶಪ್ರಾಯವಾದ ಶ್ರದ್ಧೆ ಮತ್ತು ವ್ಯವಹಾರ ಕುಶಲತೆಯಿಂದ ತಮ್ಮ ಶಾಲೆಯನ್ನು ಪರಿವರ್ತಿಸಿದ ಕಥನವನ್ನು ಹೇಳಿದ್ದಾರೆ ಉಮಾಶಂಕರ ಪೆರಿಯೋಡಿ (ಮುಖ್ಯಸ್ಥರು, ಕರ್ನಾಟಕ ರಾಜ್ಯ).

    ಪ್ರಧಾನ ಕಥನಗಳು
    youtube play iconನಕ್ಷತ್ರಗಳು ಸಂಚಿಕೆ 07 | ಮಂಡ್ಯದ ವೆಂಕಟೇಶ್‌ ಡಿ. ಎಸ್‌. ಅವರೊಡನೆ ಉಮಾಶಂಕರ್‌ ಪೆರಿಯೋಡಿ ಅವರ ಸಂಭಾಷಣೆ

    ನಕ್ಷತ್ರಗಳು ಸಂಚಿಕೆ 07 | ಮಂಡ್ಯದ ವೆಂಕಟೇಶ್‌ ಡಿ. ಎಸ್‌. ಅವರೊಡನೆ ಉಮಾಶಂಕರ್‌ ಪೆರಿಯೋಡಿ ಅವರ ಸಂಭಾಷಣೆ

    ನಕ್ಷತ್ರಗಳು ಪಾಡ್‌ಕ್ಯಾಸ್ಟ್‌ ಸರಣಿಯ 7ನೇ ಸಂಚಿಕೆಯಲ್ಲಿ, ಉಮಾಶಂಕರ್‌ ಪೆರಿಯೋಡಿ ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಶಿಕ್ಷಕರೊಬ್ಬರ ಛಲ ಮತ್ತು ಅವಿರತ ಪರಿಶ್ರಮದ ಮೇಲೆ ಬೆಳಕು ಚೆಲ್ಲುತ್ತಾರೆ. ಬದಲಾವಣೆಯನ್ನು ತರುವುದರಲ್ಲಿ ವೆಂಕಟೇಶ್‌ ಅವರಿಗಿರುವ ಉತ್ಸಾಹವು ಅವರ ಹಳ್ಳಿಯ ಜೀವನೋಪಾಯಗಳು ಮತ್ತು ಆರ್ಥಿಕ ಭದ್ರತೆಗಳನ್ನೂ ಹೇಗೆ ಉತ್ತಮಗೊಳಿಸುತ್ತವೆ ಎಂದು ತಿಳಿಯಿರಿ.

    ಪ್ರಧಾನ ಕಥನಗಳು
    youtube play iconನಕ್ಷತ್ರಗಳು ಸಂಚಿಕೆ 06 | ಶಿವಬಸಪ್ಪ, ಮಂಡ್ಯ, ಕರ್ನಾಟಕ

    ನಕ್ಷತ್ರಗಳು ಸಂಚಿಕೆ 06 | ಶಿವಬಸಪ್ಪ, ಮಂಡ್ಯ, ಕರ್ನಾಟಕ

    ಉಮಾಶಂಕರ ಪೆರಿಯೋಡಿ (ಮುಖ್ಯಸ್ಥರು, ಕರ್ನಾಟಕ ರಾಜ್ಯ) ಅವರು ಶಿವಬಸಪ್ಪನವರ (ಶಿಕ್ಷಕರು, ಹುಳಿಕೆರೆ ಹಿರಿಯ ಪ್ರಾಥಮಿಕ ಶಾಲೆ, ಮಂಡ್ಯ, ಕರ್ನಾಟಕ) ಛಲ ಮತ್ತು ಪರಿಶ್ರಮದ ಪಯಣವನ್ನು ಪರಿಚಯಿಸುತ್ತಾರೆ.

    ಪ್ರಧಾನ ಕಥನಗಳು
    youtube play iconನಕ್ಷತ್ರಗಳು | ಧರಂ ವಿಷ್ಣು ನಾಯಕ್‌, ಉತ್ತರ ಕನ್ನಡ, ಕರ್ನಾಟಕ

    ನಕ್ಷತ್ರಗಳು | ಧರಂ ವಿಷ್ಣು ನಾಯಕ್‌, ಉತ್ತರ ಕನ್ನಡ, ಕರ್ನಾಟಕ

    Tune into Episode 05 of Nakshatragalu in which Umashankar Periodi tells us about the Dharm Vishnu Nayak, a teacher in Uttara Kannada, Karnataka, who transformed education at his school.

    ಪ್ರಧಾನ ಕಥನಗಳು
    youtube play iconಪ್ರಾತ್ಯಕ್ಷಿಕಾ ಕಾರ್ಯಾಗಾರ, ಬಾಡ್ಮೇರ್‌

    ಪ್ರಾತ್ಯಕ್ಷಿಕಾ ಕಾರ್ಯಾಗಾರ, ಬಾಡ್ಮೇರ್‌

    ಈ ರೀತಿಯ ಪ್ರಾತ್ಯಕ್ಷಿಕಾ ಕಾರ್ಯಾಗಾರಗಳು, ಶಿಕ್ಷಕ ಸಮುದಯದವರು ಬೋಧನಾ ವಿಧಾನ ಕುರಿತಾದ ಅರ್ಥಪೂರ್ಣ ಚರ್ಚೆಗಳ ಮೂಲಕ ಒಬ್ಬರಿಂದೊಬ್ಬರು ಕಲಿಯಲು ಮತ್ತು ಪರಸ್ಪರ ನೆರವಾಗಲು ಅನುವು ಮಾಡಿಕೊಡುತ್ತವೆ. ಅವು ರಾಜಾಸ್ಥಾನದ ಬಾಡ್ಮೇರ್‌ನ ಎಲ್ಲ ಬ್ಲಾಕ್‌ಗಳಲ್ಲಿ ನಡೆಯುವ ತರಬೇತಿ ಶಿಬಿರಗಳಿಗೆ ನೆರವಾಗುವ ಮೂಲಕ ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ.

    ಪ್ರಧಾನ ಕಥನಗಳು
    youtube play iconಗ್ರಾಮ ಸಭೆಗಳು ಮತ್ತು ವಿಪತ್ತು ನಿರ್ವಹಣೆ | ಲುಪುಂಗಪತ್

    ಗ್ರಾಮ ಸಭೆಗಳು ಮತ್ತು ವಿಪತ್ತು ನಿರ್ವಹಣೆ | ಲುಪುಂಗಪತ್

    ಗುಮ್ಲಾ ಜಿಲ್ಲೆಯ ಲುಪುಂಗಪತ್ ಗ್ರಾಮದ ಗ್ರಾಮ ಸಭೆಯು COVID-19 ಸಮಯದಲ್ಲಿ ಸಕ್ರಿಯ ಮತ್ತು ಸಮುದಾಯವನ್ನು ಒಳಗೊಂಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಅನೇಕ ಗ್ರಾಮಗಳಿಗೆ ಸ್ಫೂರ್ತಿಯಾಯಿತು. ಈ ಕಥನವು, ಸಮುದಾಯದ ಇಚ್ಛಾಶಕ್ತಿ, ಬದ್ಧತೆ ಮತ್ತು ಗ್ರಾಮ ಸಭೆಗಳು ಸಂಕಷ್ಟದ ಸಮಯದಲ್ಲಿ ಕಾರ್ಯಗಳನ್ನು ಸಾಧಿಸಬಲ್ಲವು ಎಂಬುದಕ್ಕೆ ಒಂದು ಸ್ಪಷ್ಟ ಉದಾಹರಣೆ.

    ಪ್ರಧಾನ ಕಥನಗಳು
    youtube play iconಗ್ರಾಮ ಸಭೆಗಳಲ್ಲಿ ಪಂಚಾಯತ್‌ನ ಪಾತ್ರ | ಆರ್ಯಾ ಪಂಚಾಯತ್

    ಗ್ರಾಮ ಸಭೆಗಳಲ್ಲಿ ಪಂಚಾಯತ್‌ನ ಪಾತ್ರ | ಆರ್ಯಾ ಪಂಚಾಯತ್

    ಬಾಸಿಯಾ ಬ್ಲಾಕ್‌ನ (ಗುಮ್ಲಾ ಜಿಲ್ಲೆ) ಆರ್ಯಾ ಪಂಚಾಯತ್‌ನ ಮುಖ್ಯಸ್ಥರಾದ ಜಸಿಂತಾ ಬಾಗೆ, ತಮ್ಮ ಪಂಚಾಯತ್ ಅನ್ನು ಹೊಸ ದಿಕ್ಕುಗಳಲ್ಲಿ ಕೊಂಡೊಯ್ಯುತ್ತಿದ್ದಾರೆ. ಜಸಿಂತಾ ಪಂಚಾಯತ್ ಮತ್ತು ಗ್ರಾಮ ಸಭೆಯ ನಡುವೆ ಉತ್ತಮ ಸಮನ್ವಯವನ್ನು ಸಾಧಿಸಿದ್ದು, ಇದರಿಂದ ಆರ್ಯಾ ಜನರ ಸಮಸ್ಯೆಗಳು ಬೇಗ ಮತ್ತು ಪರಿಣಾಮಕಾರಿಯಾಗಿ ಪರಿಹಾರವಾಗುತ್ತಿವೆ.

    ಪ್ರಧಾನ ಕಥನಗಳು