ವಿವೇಕಾನಂದ ಮೆಮೋರಿಯಲ್ ಹಾಸ್ಪಿಟಲ್

ವೇಕಾನಂದ ಮೆಮೋರಿಯಲ್ ಹಾಸ್ಪಿಟಲ್ ಎಂಬುದು ಮೈಸೂರು ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸ್ಥಳೀಯ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಿರುವ 100 ಹಾಸಿಗೆಗಳ ಲಾಭರಹಿತ ಆಸ್ಪತ್ರೆಯಾಗಿದೆ.

ಟ್ರೈಬಲ್ ಹೆಲ್ತ್‌ ಇನಿಶಿಯೇಟಿವ್ (THI)

ತಮಿಳುನಾಡಿನ ಧರ್ಮಪುರಿಯ ಸಿತ್ತಿಲಿಂಗಿ ಕಣಿವೆಯಲ್ಲಿರುವ ಟ್ರೈಬಲ್ ಹೆಲ್ತ್ ಇನಿಶಿಯೇಟಿವ್‌ನ 35 ಹಾಸಿಗೆಗಳ ಆಸ್ಪತ್ರೆಯು 25 ಹಳ್ಳಿಗಳ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಿದೆ.

ಸ್ವಾಮಿ ವಿವೇಕಾನಂದ ಮೆಡಿಕಲ್ ಮಿಷನ್

ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಗಲಿಯಲ್ಲಿರುವ ಸ್ವಾಮಿ ವಿವೇಕಾನಂದ ಮೆಡಿಕಲ್ ಮಿಷನ್‌ನ 50 ಹಾಸಿಗೆಗಳ ಆಸ್ಪತ್ರೆಯು ಈ ಭಾಗದ ಹಿಂದುಳಿದ ಸ್ಥಳೀಯ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಿದೆ.

ಶಹೀದ್ ಹಾಸ್ಪಿಟಲ್

ಡಲ್ಲಿ ರಾಜ್‌ಹರಾದಲ್ಲಿರುವ 150 ಹಾಸಿಗೆಗಳ ಶಹೀದ್ ಆಸ್ಪತ್ರೆಯು ಛತ್ತೀಸ್‌ಗಢದ ಗ್ರಾಮೀಣ ಗಣಿ ಪ್ರದೇಶದಾದ್ಯಂತ ಇರುವ ಸಮುದಾಯಗಳಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತದೆ.

ಮಕುಂಡ ಕ್ರಿಶ್ಚಿಯನ್ ಲೆಪ್ರಸಿ ಮತ್ತು ಜನರಲ್ ಹಾಸ್ಪಿಟಲ್

ಮಕುಂಡ ಕ್ರಿಶ್ಚಿಯನ್ ಲೆಪ್ರಸಿ ಮತ್ತು ಜನರಲ್ ಹಾಸ್ಪಿಟಲ್ ಅಸ್ಸಾಂ, ತ್ರಿಪುರಾ ಮತ್ತು ಮಿಜೋರಾಂನಾದ್ಯಂತ ಗ್ರಾಮೀಣ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಿರುವ ಒಂದು ಧರ್ಮಾರ್ಥ ಆಸ್ಪತ್ರೆಯಾಗಿದೆ.

ದಂತೇಶ್ವರಿ ಹಾಸ್ಪಿಟಲ್ (SEARCH)

ಮಾ ದಂತೇಶ್ವರಿ ಹಾಸ್ಪಿಟಲ್ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿರುವ ಒಂದು ಲಾಭರಹಿತ ಆಸ್ಪತ್ರೆಯಾಗಿದ್ದು, ಈ ಭಾಗದ ಮತ್ತು ಸುತ್ತಮುತ್ತಲಿನ ಗ್ರಾಮೀಣ ಹಾಗೂ ಸ್ಥಳೀಯ ಸಮುದಾಯಗಳಿಗೆ ಸುಲಭವಾಗಿ ಸಿಗುವ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ.

ಜನ್ ಸ್ವಾಸ್ಥ್ಯ ಸಹಯೋಗ್

ಜನ್ ಸ್ವಾಸ್ಥ್ಯ ಸಹಯೋಗ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಛತ್ತೀಸ್‌ಗಢ ಹಾಗೂ ನೆರೆಯ ಮಧ್ಯಪ್ರದೇಶದ ಗ್ರಾಮೀಣ ಮತ್ತು ಅರಣ್ಯ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಹಾಗೂ ತರಬೇತಿಯನ್ನು ನೀಡುತ್ತದೆ.

ಗ್ರಾಮ್ ಸೇವಾ ಟ್ರಸ್ಟ್

ಗ್ರಾಮ್ ಸೇವಾ ಟ್ರಸ್ಟ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು, 100 ಹಾಸಿಗೆಗಳ ಆಸ್ಪತ್ರೆಯನ್ನು ನಡೆಸುತ್ತಿದೆ. ಇದು ಗುಜರಾತ್ ಮತ್ತು ನೆರೆಯ ಮಹಾರಾಷ್ಟ್ರದಾದ್ಯಂತ ಗ್ರಾಮೀಣ ಹಾಗೂ ಸ್ಥಳೀಯ ಸಮುದಾಯಗಳಿಗೆ ದ್ವಿತೀಯ ಹಂತದ ಆರೋಗ್ಯ ಸೇವೆಯನ್ನು ನೀಡುತ್ತದೆ.

ಕ್ರಿಶ್ಚಿಯನ್ ಹಾಸ್ಪಿಟಲ್ ಛತರ್‌ಪುರ್

ಕ್ರಿಶ್ಚಿಯನ್ ಹಾಸ್ಪಿಟಲ್ ಛತರ್‌ಪುರ್ 100 ಹಾಸಿಗೆಗಳ ಆಸ್ಪತ್ರೆಯಾಗಿದ್ದು, ಮಧ್ಯಪ್ರದೇಶದ ಬಡ ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಆರೋಗ್ಯ ಸೇವೆ ಹಾಗೂ ಶಿಕ್ಷಣವನ್ನು ಒದಗಿಸುತ್ತಿದೆ.