ಸ್ವಾಮಿ ವಿವೇಕಾನಂದ ಮೆಡಿಕಲ್ ಮಿಷನ್

ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಗಲಿಯಲ್ಲಿರುವ ಸ್ವಾಮಿ ವಿವೇಕಾನಂದ ಮೆಡಿಕಲ್ ಮಿಷನ್‌ನ 50 ಹಾಸಿಗೆಗಳ ಆಸ್ಪತ್ರೆಯು ಈ ಭಾಗದ ಹಿಂದುಳಿದ ಸ್ಥಳೀಯ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಿದೆ.
ಸೇವಾ ರೂರಲ್ (ಸೊಸೈಟಿ ಫಾರ್ ಎಜುಕೇಶನ್ ವೆಲ್ಫೇರ್ ಅಂಡ್ ಆಕ್ಷನ್)

ಸೇವಾ ರೂರಲ್ ಸಂಸ್ಥೆಯ 275 ಹಾಸಿಗೆಗಳ ಕಸ್ತೂರಬಾ ಆಸ್ಪತ್ರೆಯು ದಕ್ಷಿಣ ಗುಜರಾತ್‌ನ 3,000 ಕ್ಕೂ ಹೆಚ್ಚು ಹಳ್ಳಿಗಳ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದೆ.
ದಂತೇಶ್ವರಿ ಹಾಸ್ಪಿಟಲ್ (SEARCH)

ಮಾ ದಂತೇಶ್ವರಿ ಹಾಸ್ಪಿಟಲ್ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿರುವ ಒಂದು ಲಾಭರಹಿತ ಆಸ್ಪತ್ರೆಯಾಗಿದ್ದು, ಈ ಭಾಗದ ಮತ್ತು ಸುತ್ತಮುತ್ತಲಿನ ಗ್ರಾಮೀಣ ಹಾಗೂ ಸ್ಥಳೀಯ ಸಮುದಾಯಗಳಿಗೆ ಸುಲಭವಾಗಿ ಸಿಗುವ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ.
ಅಶ್ವಿನಿ (ಅಸೋಸಿಯೇಷನ್ ಫಾರ್ ಹೆಲ್ತ್ ವೆಲ್ಫೇರ್ ಇನ್ ದಿ ನೀಲಗಿರಿಸ್)

ಅಶ್ವಿನಿ ಸಂಸ್ಥೆಯ ‘ಗೂಡಲೂರು ಆದಿವಾಸಿ ಆಸ್ಪತ್ರೆ’ಯು ಸಮುದಾಯದ ಒಡೆತನದಲ್ಲಿರುವ ಒಂದು ಆಸ್ಪತ್ರೆ. ಇದು ತಮಿಳುನಾಡಿನ ಅತ್ಯಂತ ಸೌಲಭ್ಯ ವಂಚಿತ ಪ್ರದೇಶಗಳಲ್ಲಿ ಇದ್ದು, ಇಲ್ಲಿನ ಸ್ಥಳೀಯ ಸಮುದಾಯಕ್ಕೆ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ.
ಚಿಂಚ್‌ಪಾಡ ಕ್ರಿಶ್ಚಿಯನ್ ಹಾಸ್ಪಿಟಲ್

ಚಿಂಚ್‌ಪಾಡ ಕ್ರಿಶ್ಚಿಯನ್ ಹಾಸ್ಪಿಟಲ್ ಒಂದು ಲಾಭರಹಿತ ಆಸ್ಪತ್ರೆಯಾಗಿದ್ದು, ಮಹಾರಾಷ್ಟ್ರ ಹಾಗೂ ನೆರೆಯ ಗುಜರಾತ್‌ನ ಹಲವು ಭಾಗಗಳಲ್ಲಿರುವ ಪ್ರಮುಖ ಸ್ಥಳೀಯ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಿದೆ.
ಕ್ರಿಶ್ಚಿಯನ್ ಹಾಸ್ಪಿಟಲ್ ಬಿಸಂಕಟಕ್

ಕ್ರಿಶ್ಚಿಯನ್ ಹಾಸ್ಪಿಟಲ್ ಬಿಸಂಕಟಕ್, ದಕ್ಷಿಣ ಒಡಿಶಾದಲ್ಲಿರುವ ತಲುಪಲು ದುಸ್ತರವಾದ ಮತ್ತು ಅವಕಾಶ ವಂಚಿತ ಪ್ರದೇಶಗಳಲ್ಲಿನ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಿರುವ ಒಂದು ಲಾಭರಹಿತ ಆಸ್ಪತ್ರೆಯಾಗಿದೆ.
ಹರ್ಬರ್ಟ್‌ಪುರ್ ಕ್ರಿಶ್ಚಿಯನ್ ಹಾಸ್ಪಿಟಲ್

ಹರ್ಬರ್ಟ್‌ಪುರ್ ಕ್ರಿಶ್ಚಿಯನ್ ಹಾಸ್ಪಿಟಲ್ 150 ಹಾಸಿಗೆಗಳ ಧರ್ಮಾರ್ಥ ಆಸ್ಪತ್ರೆ. ಇದು ಉತ್ತರಾಖಂಡದ ಪಶ್ಚಿಮ ಡೂನ್ ಕಣಿವೆಯಲ್ಲಿ ದ್ವಿತೀಯ ಹಂತದ ಮತ್ತು ವಿಶೇಷ ಆರೋಗ್ಯ ಸೇವೆಯನ್ನು ಒದಗಿಸುತ್ತದೆ.