ರಾಜಸ್ಥಾನದಲ್ಲಿ ನಮ್ಮ ಕೆಲಸವು 2005 ರಲ್ಲಿ ಪ್ರಾರಂಭವಾಯಿತು.
ನಾವು ಪ್ರಸ್ತುತ ಬಾನ್ಸ್ವಾಡಾ, ಬಲೋತ್ರಾ, ಬಾಡ್ಮೇರ್, ಚಿತ್ತೋರ್ಗಢ್, ದುಂಗರಪುರ, ಜಾಲೋರ್, ಜೈಪುರ, ಪಾಲಿ, ಪ್ರತಾಪ್ಗಢ್, ರಾಜಸಮಂದ್, ಸಿರೋಹಿ ಮತ್ತು ಟೋಂಕ್ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಕೆಲಸವು ಶಿಕ್ಷಣ, ಆರೋಗ್ಯ ಮತ್ತು ಇತರ ಕ್ಷೇತ್ರಗಳಲ್ಲಿ ವಿಸ್ತರಿಸಿದೆ.


ಶಿಕ್ಷಣ
ನಮ್ಮ ಕೆಲಸವು ಆರಂಭಿಕ ಬಾಲ್ಯ ಶಿಕ್ಷಣದಿಂದ (ECE) ಪ್ರೌಢ ಹಂತದ ಶಿಕ್ಷಣದವರೆಗೆ ವ್ಯಾಪಿಸಿದೆ. ನಾವು ಶಿಕ್ಷಕರು, ಶಾಲಾ ಮುಖ್ಯಸ್ಥರು, ಅಧಿಕಾರಿಗಳು, ಕಾಲೇಜು ಅಧ್ಯಾಪಕರು ಮತ್ತು ರಾಜಾಸ್ಥಾನ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯೊಂದಿಗೆ (RSCERT) ತೊಡಗಿಸಿಕೊಂಡಿದ್ದೇವೆ. ರಾಜಾಸ್ಥಾನದಲ್ಲಿರುವ ಮೂರು ಅಜೀಂ ಪ್ರೇಮ್ಜಿ ಶಾಲೆಗಳು ಬಾಡ್ಮೇರ್, ಸಿರೋಹಿ ಮತ್ತು ಟೋಂಕ್ನಲ್ಲಿವೆ.

50
ಶಿಕ್ಷಕ ಕಲಿಕಾ ಕೇಂದ್ರಗಳು
16,400+
ಅಂಗನವಾಡಿ ಶಿಕ್ಷಕರೊಡನೆ ನೇರವಾಗಿ ತೊಡಗಿಸಿಕೊಂಡಿದ್ದೇವೆ
69,800 +
ಪ್ರಾಥಮಿಕ ಶಾಲಾ ಶಿಕ್ಷಕರೊಡನೆ ನೇರವಾಗಿ ತೊಡಗಿಸಿಕೊಂಡಿದ್ದೇವೆ
14,47,348
ಮಕ್ಕಳು
ಅಜೀಂ ಪ್ರೇಮ್ಜಿ ಸ್ಕಾಲರ್ಶಿಪ್
ಅವಕಾಶವಂಚಿತ ಹಿನ್ನೆಲೆಯುಳ್ಳ ವಿದ್ಯಾರ್ಥಿನಿಯರು ತಮ್ಮ ಕಾಲೇಜು ಶಿಕ್ಷಣವನ್ನು ಮುಂದುವರಿಸಲು ನೆರವಾಗುವ ಉದ್ದೇಶದಿಂದ ಈ ಅನುಕ್ರಮವನ್ನು 2024ರಲ್ಲಿ ಪ್ರಾರಂಭಿಸಲಾಯಿತು. ಮೊದಲ ಸುತ್ತಿನಲ್ಲಿ, ರಾಜಾಸ್ಥಾನದ 22 ಜಿಲ್ಲೆಗಳ ವಿದ್ಯಾರ್ಥಿನಿಯರಿಗೆ ಅರ್ಜಿ ಸಲ್ಲಿಸುವ ಅವಕಾಶ ಇತ್ತು ಮತ್ತು 5,200 ಹುಡುಗಿಯರು ವಿದ್ಯಾರ್ಥಿ ವೇತನ ಪಡೆದರು. 2025-26ನೇ ಸುತ್ತಿನಲ್ಲಿ, ಈ ಉಪಕ್ರಮವನ್ನು ರಾಜಾಸ್ಥಾನದ ಎಲ್ಲ 41 ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. 2025-26ರಲ್ಲಿ ನಾವು ರಾಜಾಸ್ಥಾನದಲ್ಲಿ 19,956 ವಿದ್ಯಾರ್ಥಿನಿಯರಿಗೆ ಸ್ಕಾಲರ್ಶಿಪ್ ಆಫರ್ ಮಾಡಿದ್ದೇವೆ.
ಆರೋಗ್ಯ
ನಾವು ಡಿಸೆಂಬರ್ 2024ರಲ್ಲಿ ಆರೋಗ್ಯ ಕ್ಷೇತ್ರದಲ್ಲಿ ನಮ್ಮ ಕೆಲಸವನ್ನು ಬಾನ್ಸ್ವಾಡಾ ಜಿಲ್ಲೆಯ ಘಾಟೋಲ್ ಬ್ಲಾಕ್ನಲ್ಲಿ ಪ್ರಾರಂಭಿಸಿದೆವು ಮತ್ತು ಈಗ ಬಾನ್ಸ್ವಾಡಾ ಹಾಗೂ ಬಾಡ್ಮೇರ್ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಅಗತ್ಯ ಆರೋಗ್ಯ ಸೇವೆಗಳ ಲಭ್ಯತೆಯನ್ನು ಸುಧಾರಿಸುವ ಮೂಲಕ, ಈ ಪ್ರದೇಶದ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅತ್ಯಂತ ದುರ್ಬಲವಾಗಿರುವ ವರ್ಗದ ಕುಟುಂಬಗಳ ಆರೋಗ್ಯದ ಸ್ಥಿತಿಗತಿಗಳನ್ನು ಉತ್ತಮಪಡಿಸುವುದು ನಮ್ಮ ಉದ್ದೇಶವಾಗಿದೆ. ನಮ್ಮ ಕೆಲಸವು ಪರಸ್ಪರ ಸಂಬಂಧ ಹೊಂದಿರುವ ನಾಲ್ಕು ಕ್ಷೇತ್ರಗಳ ಮೇಲೆ ಕೇಂದ್ರೀಕೃತವಾಗಿದೆ: ಸೌಲಭ್ಯಗಳು ಮತ್ತು ಸೇವೆಗಳು, ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕಾಂಶ ದಿನಗಳು, ರೆಫರಲ್ಗಳು ಮತ್ತು ಸಮುದಾಯದ ಮಾಲೀಕತ್ವ.

ಬಾಲವಾಡಿಗಳು
ನಮ್ಮ ಬಾಲವಾಡಿಗಳು ಏಳು ತಿಂಗಳಿಂದ ಮೂರು ವರ್ಷದೊಳಗಿನ ದುರ್ಬಲ ಮಕ್ಕಳ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸಲು ಶ್ರಮಿಸುತ್ತವೆ. ರಾಜಸ್ಥಾನದಲ್ಲಿ ನಮ್ಮ ಮೊದಲ ಬಾಲವಾಡಿಯು ರಾಜಸಮಂದ್ ಜಿಲ್ಲೆಯಲ್ಲಿದ್ದು, ಅದನ್ನು ಉದಯಪುರದ ನಮ್ಮ ಸಹವರ್ತಿ ಸಂಸ್ಥೆಯಾದ ಸೇವಾ ಮಂದಿರ್ ಜೊತೆಗಿನ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಗಿದೆ.
ಇತರ ಕ್ಷೇತ್ರಗಳ
ಅನುದಾನಗಳು
ರಾಜಾಸ್ಥಾನದಲ್ಲಿ ನಾವು 118 ಸಹವರ್ತಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದು, ಮಕ್ಕಳು, ಸಾಂವಿಧಾನಿಕ ಮೌಲ್ಯಗಳು, ದಿವ್ಯಾಂಗತೆ, ಲಿಂಗತ್ವ ನ್ಯಾಯ, ಆಡಳಿತ, ಆರೋಗ್ಯ, ಭೂಮಿ, ನೀರು ಮತ್ತು ಅರಣ್ಯ, ನಗರ ಉಪಕ್ರಮಗಳು ಮುಂತಾದ ಕ್ಷೇತ್ರಗಳ ಮೇಲೆ ಗಮನ ಹರಿಸುತ್ತಿದ್ದೇವೆ.
ನಮ್ಮೊಂದಿಗೆ ಕೆಲಸ ಮಾಡಿ
ನಿಮ್ಮ ಕೌಶಲ್ಯಗಳು ಮತ್ತು ಉದ್ದೇಶಗಳಿಗೆ ತಕ್ಕ ಹುದ್ದೆಯನ್ನು ನಮ್ಮ ಹೊಸ ಉದ್ಯೋಗಾವಕಾಶಗಳ ಪಟ್ಟಿಯಲ್ಲಿ ಗಮನಿಸಿ.
ಅಂಕಿಅಂಶಗಳನ್ನು ಜೂನ್ 2026ರಲ್ಲಿ ಪಡೆಯಲಾಗಿದೆ. ಇವುಗಳನ್ನು ವರ್ಷಕ್ಕೊಮ್ಮೆ ಪರಿಷ್ಕರಿಸಲಾಗುವುದು.
