ಭೋಪಾಲ್‌ನಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ

ಭೋಪಾಲ್‌ನಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವನ್ನು 2023ರಲ್ಲಿ ಸ್ಥಾಪಿಸಲಾಯಿತು. ಇಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳು ಹಾಗೂ ಡಿಪ್ಲೊಮಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಹೆಚ್ಚಿನ ಓದಿಗಾಗಿ

ಆರೋಗ್ಯ ಹಾಗೂ ಜೀವನೋಪಾಯ ನಿರ್ವಹಣಾ ಕ್ಷೇತ್ರಗಳಿಗೆ ವಿಸ್ತರಣೆ

ಭೋಪಾಲ್‌ನಲ್ಲಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಸ್ನಾತಕೋತ್ತರ ಕಾರ್ಯಕ್ರಮವನ್ನು (ಎಮ್‌ ಪಿ ಎಚ್) ಆರಂಭಿಸಿರುವುದರ ಜೊತೆಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸವನ್ನು ಪ್ರಾರಂಭಿಸಿದ್ದೇವೆ. ದುರ್ಬಲ ಸಮುದಾಯಗಳಿಗೆ ಆರೋಗ್ಯ ಸೇವೆಗಳು ಲಭ್ಯವಾಗುವಂತೆ ಮಾಡಲು ಆಸ್ಪತ್ರೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳ (ಎನ್ ಜಿ ಒ) ಜೊತೆಗೆ ಕೆಲಸ ಮಾಡಲು ನಾವು ಬಯಸುತ್ತೇವೆ.

ಕೋವಿಡ್ -19ಕ್ಕೆ ನಮ್ಮ ಪ್ರತಿಕ್ರಿಯೆ

ಭಾರತದಲ್ಲಿ ಕೋವಿಡ್ -19ರ ಸ್ಫೋಟದಿಂದಾಗಿ ಉಂಟಾದ ಆರೋಗ್ಯ ಹಾಗೂ ಮಾನವತೆಯ ತೀವ್ರವಾದ ಬಿಕ್ಕಟ್ಟಿನ ಸಂದರ್ಭದಲ್ಲಿ, ಈ ಸಾಂಕ್ರಾಮಿಕ ಪಿಡುಗಿನ ಪರಿಣಾಮಗಳನ್ನು ಎದುರಿಸಲು ನಾಗರಿಕ ಸಮಾಜಕ್ಕೆ ನೆರವಾಗುವ ಉದ್ದೇಶದಿಂದ ಕಾರ್ಯಪ್ರವೃತ್ತರಾದೆವು.

ಅನುದಾನಗಳು

ಚಿತ್ರ ಕೃಪೆ – ಪುರುಷೋತ್ತಮ್‌ ಠಾಕೂರ್‌ ಲಾಭೋದ್ದೇಶರಹಿತ ಹಾಗೂ ನಾಗರಿಕ ಸಮಾಜದ ಸಂಸ್ಥೆಗಳಿಗೆ ನಾವು ನೀಡುತ್ತಿರುವ ಆರ್ಥಿಕ ಅನುದಾನಗಳು ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವುಗಳಿಗೆ ನೆರವು ನೀಡುತ್ತಿವೆ. ದುರ್ಬಲರು ಹಾಗೂ ಅಂಚಿಗೆ ತಳ್ಳಲ್ಪಟ್ಟವರ ಜೀವನವನ್ನು ಸುಧಾರಿಸುವ ನಮ್ಮ ಧ್ಯೇಯವನ್ನು ಇದು ದೃಢೀಕರಿಸುತ್ತದೆ. ಪ್ರಸ್ತುತ, ನಾವು ಎಂಟು ನೂರಕ್ಕೂ ಹೆಚ್ಚು ಇಂತಹ ಸಂಸ್ಥೆಗಳಿಗೆ ನೆರವು ನೀಡುತ್ತಿದ್ದೇವೆ. ಹೆಚ್ಚಿನ ಓದಿಗಾಗಿ

ಅಜೀಂ ಪ್ರೇಮ್‌ಜಿ ಶಾಲೆಗಳು

ಮೊದಲನೇ ಅಜೀಂ ಪ್ರೇಮ್‌ಜಿ ಶಾಲೆಯನ್ನು 2012ರಲ್ಲಿ ಪ್ರಾರಂಭಿಸಲಾಯಿತು. ಇದು ದೇಶದಲ್ಲಿ ಕಿಂಡರ್ ಗಾರ್ಟನ್ ಇಂದ – 12ನೇ ತರಗತಿವರೆಗಿನ ಶಿಕ್ಷಣದ ಗುಣಮಟ್ಟದ ನಮ್ಮ ಅಭಿವ್ಯಕ್ತಿಯಾಗಿದೆ. ಈಗ ನಾವು ನಾಲ್ಕು ರಾಜ್ಯಗಳಲ್ಲಿ ಇಂತಹ ಒಂಬತ್ತು ಶಾಲೆಗಳನ್ನು ನಡೆಸುತ್ತಿದ್ದೇವೆ. ಅವು ಮಕ್ಕಳಿಗೆ ಸುರಕ್ಷಿತವಾದ, ಒಳಗೊಳ್ಳುವ ಹಾಗೂ ಸಮೃದ್ಧಮಯವಾದ ತಾಣಗಳಾಗಿವೆ. ಹೆಚ್ಚಿನ ಓದಿಗಾಗಿ

ಕ್ಷೇತ್ರ ಸಂಸ್ಥೆಗಳು​

ಭಾರತದಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವತ್ತ ನಮ್ಮ ಕ್ಷೇತ್ರ ಕಾರ್ಯವು ಗಮನಹರಿಸುತ್ತದೆ. ಈ ಪ್ರಯತ್ನದಲ್ಲಿ ದೇಶದ ಹೆಚ್ಚು ಅವಕಾಶವಂಚಿತ ಪ್ರದೇಶಗಳಿಗೆ ಒತ್ತನ್ನು ನೀಡಲಾಗುತ್ತದೆ. ಹೆಚ್ಚಿನ ಓದಿಗಾಗಿ

ಬೆಂಗಳೂರಿನಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ

ಶಿಕ್ಷಣ ಹಾಗೂ ಅಭಿವೃದ್ಧಿ ಕ್ಷೇತ್ರಗಳಲ್ಲಿ ಅರ್ಹತೆಯುಳ್ಳ, ಅಗತ್ಯ ಜ್ಞಾನ ಹೊಂದಿದ ವೃತ್ತಿಪರರನ್ನು ಪೋಷಿಸುವ ಹಾಗೂ ತರಬೇತಿ ನೀಡುವ ತಾಣವಾಗಿ, 2010ರಲ್ಲಿ ನಮ್ಮ ಮೊದಲ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಹೆಚ್ಚಿನ ಓದಿಗಾಗಿ

ಶಾಲಾ ಶಿಕ್ಷಣದಲ್ಲಿ ಕಾರ್ಯಕ್ರಮಗಳ ಮೂಲಕ ಮಧ್ಯಪ್ರವೇಶ

ಶಾಲೆಗಳಿಗೆ ಮಕ್ಕಳ ಪ್ರವೇಶಾತಿ, ನೋಂದಣಿ ಹಾಗೂ ಶಾಲೆಗಳಲ್ಲಿ ಮಕ್ಕಳು ಉಳಿದುಕೊಳ್ಳುವುದನ್ನು ವಿಸ್ತರಿಸುವುದು ಹಾಗೂ ಕಾರ್ಯಕ್ರಮಗಳ ಮೂಲಕ ಮಧ್ಯಪ್ರವೇಶಗಳನ್ನು ಮಾಡುತ್ತಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ಸಂಸ್ಥೆಯು ತೊಡಗಿಕೊಂಡಿತು. ಹೆಚ್ಚಿನ ಓದಿಗಾಗಿ